ನಗುವ ಹೂವು - 1971 ರಲ್ಲಿ ತಯಾರಾದ ಕನ್ನಡ ಚಲನಚಿತ್ರವಾಗಿದ್ದು ಛಾಯಾಚಿತ್ರಗ್ರಾಹಕರಾದ ಆರ್. ಎನ್. ಕೆ. ಪ್ರಸಾದ್ ಇದನ್ನು ನಿರ್ದೇಶಿಸಿದ್ದಾರೆ. ಇದರ ನಿರ್ಮಾಪಕರು ಆರ್. ಎನ್. ಸುದರ್ಶನ್. ಇದರ ಸಾಹಿತ್ಯವು ನಟಿ ಶೈಲಶ್ರೀ ಅವರದು. ಸುದರ್ಶನ್ ಮತ್ತು ಶೈಲಶ್ರೀ ಅವರುಗಳಲ್ಲದೆ ಚಿತ್ರನಟರಾದ ಕೆ.ಎಸ್. ಅಶ್ವಥ್ , ರಂಗಾ, ಆರ್ ನಾಗೇಂದ್ರರಾಯರು ಮತ್ತು ಬಿ.ವಿ. ರಾಧಾ ಅವರುಗಳು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 18ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದಲ್ಲಿನ ಉತ್ತಮ ಕಥಾಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಚಲನಚಿತ್ರದ ಹಿನ್ನೆಲೆ ಸಂಗೀತವನ್ನು ಜಿ. ಕೆ. ವೆಂಕಟೇಶ್ ಅವರು ಸಂಯೋಜಿಸಿದರು. ಆರ್. ಎನ್. ಜಯಗೋಪಾಲ್ ಅವರು ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ. == ಪಾತ್ರವರ್ಗ == ಆರ್.ಎನ್.ಸುದರ್ಶನ್ ಶೈಲಶ್ರೀ ರಂಗಾ ಕೆ.ಎಸ್.ಅಶ್ವಥ್ ಆರ್.ನಾಗೇಂದ್ರರಾವ್ ಬಿ.ವಿ. ರಾಧಾ ಬಾಲಕೃಷ್ಣ ಗಣಪತಿ ಭಟ್ ತೂಗುದೀಪ ಶ್ರೀನಿವಾಸ್ ವಿಜಯಶ್ರೀ ಬಿ.ಜಯಶ್ರೀ ಮಾಸ್ಟರ್ ಚಂದ್ರಶೇಖರ್ ಹನುಮಂತಾಚಾರ್ ವಿಜಯಕುಮಾರ ಬಿ. ಜಯಾ == ಚಿತ್ರಗೀತೆಗಳು ==